Mining National College -Sandur: 200 ಕೋಟಿ ರೂಪಾಯಿ ವೆಚ್ಚದಲ್ಲಿ ಗಣಿ ನಾಡು ಸಂಡೂರಿನಲ್ಲಿ ಆರಂಭವಾಗಲಿರುವ ದೇಶದ 2ನೇ ಮೈನಿಂಗ್ ಕಾಲೇಜು ಶಂಕುಸ್ಥಾಪನೆಗೆ ಸ್ವತ: ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ
ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸಹ ರಾಜ್ಯದಲ್ಲಿ ಅಬ್ಬರದ ಪ್ರಚಾರ ಮಾಡ್ತಿದ್ದಾರೆ. ಈಗಾಗಲೇ ವಿವಿಧ ಜಿಲ್ಲೆಗಳಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಗಣಿ ನಾಡು ಬಳ್ಳಾರಿ ಜಿಲ್ಲೆಗೂ ಆಗಮಿಸಲಿದ್ದಾರೆ. ಕಾಂಗ್ರೆಸ್ ಪಕ್ಷದ ಭದ್ರಕೋಟೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮೈನಿಂಗ್ ಕಾಲೇಜಿಗೆ ಶಂಕುಸ್ಥಾಪನೆ ನೇರವೇರಿಸಿ ಗಣಿ ನಾಡಲ್ಲಿ ಕೇಸರಿ ಪತಾಕೆ ಹಾರಿಸಲು ರಣತಂತ್ರ ರೂಪಿಸಿದ್ದಾರೆ. ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಮಂಡ್ಯ, ಮೈಸೂರು, ಶಿವಮೊಗ್ಗದಲ್ಲಿ ಮೋದಿ ಪ್ರಚಾರ ಮಾಡಿದ್ದಾಯ್ತು. ಗಣಿ ನಾಡು ಬಳ್ಳಾರಿಗೂ (Bellari) ಆಗಮಿಸಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ (Narendra Modi). ಗಣಿ ನಾಡಿನ ಮೈನಿಂಗ್ ಕಾಲೇಜಿಗೆ (Mining National College) ಶಂಕುಸ್ಥಾಪನೆ (foundation stone) ಮೋದಿ ಆಗಮನ. ಯೆಸ್. ರಾಜ್ಯದ ವಿವಿಧ ಜಿಲ್ಲೆಗಳಿಗೆ ಈಗಾಗಲೇ ಪ್ರವಾಸ ಮಾಡಿರೋ ಪ್ರಧಾನಿ ನರೇಂದ್ರ ಮೋದಿ ಗಣಿ ನಾಡು ಬಳ್ಳಾರಿ ಜಿಲ್ಲೆಗೂ ಶೀಘ್ರದಲ್ಲೂ ಆಗಮಿಸಲಿದ್ದಾರೆ.
ಗಣಿ ನಾಡು ಬಳ್ಳಾರಿ ಜಿಲ್ಲೆಯ ಸಂಡೂರು (Sandur) ಅಂದ್ರೆ ಕಾಂಗ್ರೆಸ್ ನ ಭದ್ರಕೋಟೆ. ಕಾಂಗ್ರೆಸ್ ನ ಕೋಟೆ ಮೇಲೆ ಕೇಸರಿ ಪತಾಕೆ ಹಾರಿಸಲು ಬಿಜೆಪಿ ನಾಯಕರು ರಣತಂತ್ರ ಮಾಡಿದ್ದಾರೆ. ಅದಕ್ಕಾಗೇ ಈಗಾಗಲೇ ಚುನಾವಣಾ ಚಾಣಕ್ಯ ಅಮಿತ್ ಶಾ ಸಂಡೂರಿನಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಸಹ ಸಂಡೂರು ಕ್ಷೇತ್ರಕ್ಕೆ ಆಗಮಿಸ್ತಾರಂತೆ. ಹೌದು. ಗಣಿ ಬಾಧಿತ ಪ್ರದೇಶಗಳ ಅಭಿವೃದ್ದಿಗಾಗಿ ತಗೆದಿರಿಸಲಾಗಿರುವ ಕೆಎಂಆರ್ ಸಿ ಫಂಡ್ ನಲ್ಲಿ ಮೈನಿಂಗ್ ಕಾಲೇಜು ಸ್ಥಾಪನೆ ಮಾಡಲಾಗ್ತಿದೆ.
200 ಕೋಟಿ ರೂಪಾಯಿ ವೆಚ್ಚದಲ್ಲಿ ಗಣಿ ನಾಡು ಸಂಡೂರಿನಲ್ಲಿ ಆರಂಭವಾಗಲಿರುವ ದೇಶದ 2ನೇ ಮೈನಿಂಗ್ ಕಾಲೇಜು ಶಂಕುಸ್ಥಾಪನೆಗೆ ಸ್ವತ: ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಮಾರ್ಚ್ ತಿಂಗಳ ಅಂತ್ಯದೊಳಗೆ ಮೈನಿಂಗ್ ಕಾಲೇಜಿಗೆ ಶಂಕುಸ್ಪಾಪನೆ ನೇರವೇರುವ ಸಾಧ್ಯತೆಯಿದ್ದು ಪ್ರಧಾನಿ ನರೇಂದ್ರ ಮೋದಿ ಮೂಲಕವೇ ಕಾಲೇಜು ಆರಂಭಿಸಲು ಬಿಜೆಪಿ ನಾಯಕರು ರಣತಂತ್ರ ರೂಪಿಸಿದ್ದಾರೆ.
ಸಂಡೂರು ವಿಧಾನಸಭಾ ಕ್ಷೇತ್ರ ಹೇಳಿ ಕೇಳಿ ಕಾಂಗ್ರೆಸ್ ನ ಭದ್ರಕೋಟೆಯಾಗಿದೆ. ಇದೂವರೆಗೂ ನಡೆದ 15 ಚುನಾವಣೆಗಳಲ್ಲಿ 13 ಭಾರಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಒಂದು ಬಾರಿಯೂ ಬಿಜೆಪಿ ಖಾತೆ ತಗೆಯದ ಪರಿಣಾಮ ಸಂಡೂರು ವಿಧಾನಸಭಾ ಕ್ಷೇತ್ರ ಗೆಲ್ಲಲು ಬಿಜೆಪಿ ನಾಯಕರು ಈ ಬಾರಿ ರಣತಂತ್ರ ರೂಪಿಸಿದ್ದಾರೆ. ಸಂಡೂರು ವಿಧಾನಸಭಾ ಕ್ಷೇತ್ರದಿಂದ ಸಚಿವ ಬಿ ಶ್ರೀರಾಮುಲು ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಚುನಾವಣಾ ಚಾಣಕ್ಯ ಅಮಿತ್ ಶಾ ಸಂಡೂರಿನಲ್ಲಿ ಅಬ್ಬರದ ಪ್ರಚಾರ ನಡೆಸಿಯಾಗಿದೆ. ಇದೀಗ ಮೈನಿಂಗ್ ಕಾಲೇಜು ಶಂಕುಸ್ಥಾಪನೆ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಗಣಿ ನಾಡಿಗೆ ಆಗಮಿಸಲಿದ್ದಾರೆ. ಈ ಮೂಲಕ ಮೋದಿ ಪ್ರಭಾವದಿಂದ ಸಂಡೂರು ಕ್ಷೇತ್ರ ಗೆಲ್ಲಲು ಬಿಜೆಪಿ ನಾಯಕರು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೇ ಶುರುವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಅಬ್ಬರ ಪ್ರಚಾರ ಪ್ರವಾಸ ಮಾಡ್ತಿದ್ದಾರೆ. ಇದೀಗ ಗಣಿ ನಾಡಿನ ಸಂಡೂರಿಗೂ ಪ್ರಧಾನಿ ಮೋದಿ ಆಗಮಿಸುತ್ತಿರುವುದರಿಂದ ಸಂಡೂರು ವಿಧಾನಸಭಾ ಕ್ಷೇತ್ರ ಗೆಲ್ಲಬಹುದು ಅನ್ನೋದು ಬಿಜೆಪಿ ನಾಯಕರ ಲೆಕ್ಕಾಚಾರ. ಆದ್ರೆ ಕಾಂಗ್ರೆಸ್ನ ಭದ್ರಕೋಟೆ ಮೇಲೆ ಕೇಸರಿ ಪತಾಕೆ ಹಾರುತ್ತಾ ಅನ್ನೋದು ಕಾಯ್ದುನೋಡಬೇಕಿದೆ.