ಬಿಜೆಪಿಯನ್ನು ಬೆಂಬಲಿಸಲು ಅಸಲಿ ಕಾರಣ ಬಿಚ್ಚಿಟ್ಟ ಸುಮಲತಾ ಅಂಬರೀಶ್​​.. ಏನದು?

Byವರದಿಗಾರ

Mar 12, 2023

ಬೆಂಗಳೂರು: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅವರು ಈಗ ಸರಣ ಟ್ವೀಟ್​ ಮಾಡಿದ್ದಾರೆ. ಟ್ವೀಟ್​ನಲ್ಲಿ ತಾನು ಯಾಕೆ ಬಿಜೆಪಿಗೆ ಬೆಂಬಲ ಘೋಷಿಸಿದ್ದು ಎಂಬ ಬಗ್ಗೆ ರಿವೀಲ್​ ಮಾಡಿದ್ದಾರೆ.

 

ಮಂಡ್ಯ ಕ್ಷೇತ್ರದ ನನ್ನ ಸ್ವಾಭಿಮಾನಿಗಳೇ. ಮಂಡ್ಯ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಮತ್ತು ನನ್ನ ಸ್ವಾಭಿಮಾನಿ ಮಂಡ್ಯದ ಜನತೆಯ ನೆಮ್ಮದಿಯ ನಾಳೆಗಳಿಗಾಗಿ ಪ್ರಧಾನ ಮಂತ್ರಿಗಳಾದ ಮಾನ್ಯ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿರುವೆ ಎಂದು ಟ್ವೀಟ್​​ನಲ್ಲಿ ಬರೆದುಕೊಂಡಿದ್ದಾರೆ.ವಿಶ್ವದ ನಾಯಕರಾಗಿ ಭಾರತವನ್ನು ಮುನ್ನೆಡೆಸುತ್ತಿರುವ ಪ್ರಧಾನ ಮಂತ್ರಿಗಳು ಮಂಡ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತಾರೆ ಎನ್ನುವ ವಿಶ್ವಾಸ ನನ್ನದು. ಎಂದಿನಂತೆ ನಿಮ್ಮ ಆಶೀರ್ವಾದ, ಪ್ರೀತಿ ಸದಾ ನನ್ನ ಜೊತೆಗಿರಲಿ. ರಾಜಕಾರಣ ಬೇಕಾದರೂ ಬಿಡುತ್ತೇನೆ ಸ್ವಾಭಿಮಾನ ಬಿಡಲಾರೆ, ಪ್ರಾಣ ಬೇಕಾದರೂ ಬಿಡುತ್ತೇನೆ ಮಂಡ್ಯವನ್ನು ಬಿಡಲಾರೆ ಎಂದಿದ್ದಾರೆ ಮತ್ತೊಂದು ಟ್ವೀಟ್​ ಮಾಡಿದ್ದಾರೆ ಸುಮಲತಾ.