ವಿಜೃಂಭಣೆಯಿಂದ ಜರುಗಿದ ಶ್ರೀ ದೊಡ್ಡಬಸವೇಶ್ವರ ಮಹಾರಥೋತ್ಸವ

Byವರದಿಗಾರ

Mar 8, 2023

ಕುರುಗೋಡು: ಪಟ್ಟಣದ ಐತಿಹಾಸಿಕ ಶ್ರೀ ದೊಡ್ಡ ಬಸವೇಶ್ವರ ಸ್ವಾಮಿ ಮಹಾರಥೋತ್ಸವ ಮಂಗಳವಾರ ಸಂಜೆ ಸಹಸ್ರಾರು ಭಕ್ತರ ನಡುವೆ ವಿಜೃ೦ಬಣೆಯಿಂದ ಜರುಗಿತು. ಪಟ್ಟಣದ ಸುತ್ತಮುತ್ತಲಿನ ರಾಜ್ಯ, ಜಿಲ್ಲೆ, ತಾಲೂಕು ಮತ್ತು ಗ್ರಾಮಗಳಿಂದ ಭಕ್ತರು ಪಾದಯಾತ್ರೆ, ಎತ್ತಿನ ಬಂಡಿ ಮತ್ತು ಟ್ರ್ಯಾಕ್ಟರಗಳು ಇನ್ನಿತರ ವಾಹನಗಳ ಮುಖಾಂತರ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಜಾತ್ರೆಗೆ ಆಡಿಮಿಸಿದ್ದರು.

ರಥೋತ್ಸವದ ಮೊದಲಿಗೆ ಕೆರೆಕೆರೆ, ಮುಷ್ಟಗಟ್ಟೆ ಮತ್ತು ಸೋಮ ಲಾಪುರ ಗ್ರಾಮಗಳ ವಾಲ್ಮೀಕಿ ಜನಾಂಗದವರು ಧೂಳುಗಾಯಿ, ಕಳಸ ಮತ್ತು ಪೂರ್ಣ ಕುಂಭವನ್ನು ಮಧ್ಯಾಹ್ನದ ಹೊತ್ತಿಗೆ ಸಮರ್ಪಿಸಿದರು.

ನಂತರ ಶ್ರೀ ಸ್ವಾಮಿ ಗೂಳಿ(ಬಸವ)ಯನ್ನು ಅಲಂಕಾರ ಮಾಡಿ ಸಕಲ ವಾಧ್ಯವೃ೦ದ ಹಾಗೂ ಕಳಸ ಮುತ್ತೈದೆಯರ ಮೂಲಕ ಶ್ರೀಶಿವ ಶರಣೆ ನೀಲಮ್ಮ ನವರ ಮಠಕ್ಕೆ ಹೋಗಿ ಅಲ್ಲಿಂದ ಮಠದ ಸ್ವಾಮಿಗಳನ್ನು ಮೆರವಣಿಗೆ ಮೂಲಕ ಕರೆ ತಂದು ರಥದಲ್ಲಿ ಕೂಡಿಸಿ, ಜೋತೆಗೆ ಶ್ರೀ ದೋಡ್ಡಬಸವೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು

ಕೂಡಿಸಲಾಯಿತು. ಶ್ರೀ ದೊಡ್ಡಬಸವೇಶ್ವರ ಮಹಾರಥೋತ್ಸವದಲ್ಲಿ ಪಾಲ್ಗೊಳ್ಳಲು ಸುತ್ತಮುತ್ತಲಿನ ಗ್ರಾಮಸ್ಥರು ಉತ್ಸಹದಿಂದ ಆಗಮಿಸುವುದು ಕ೦ಡು ಬ೦ತು.

ಅಲ್ಲದೆ ಪಕ್ಕದ ರಾಯಚೂರು, ಕೊಪ್ಪಳ, ಗದಗ್‌, ಹುಬ್ಬಳಿ, ದಾವಣಗೇರಿ ಸೇರಿದಂತೆ ನಾನಾ ಜಿಲ್ಲೆ ಹಾಗೂ ಪಕ್ಕದ ಆಂಧ್ರ, ಮಹರಾಷ್ಟಾ ಸರಿದಂತೆ ನಾನಾ ರಾಜ್ಯದಿಂದ ಲಕ್ಷಕ್ಕೂ ಹೆಚ್ಚಿನ ಜನಸ್ತೋಮ ಆಗಮಿಸಿದ್ದರು.