ಸಂಡೂರಿನಿಂದಲೇ ವಿಜಯದ ಕಹಳೆ ಮೊಳಗಿಸಲು ಶಾ ಆಗಮನ : ಶ್ರೀರಾಮುಲು

Byವರದಿಗಾರ

Feb 21, 2023

ಫೆ. 23ರಂದು ಸಂಡೂರಿಗೆ ಅಮಿತ್‌ ಶಾ ಆಗಮಿಸುತ್ತಿದ್ದು, 2023ರ ಸಾರ್ವತ್ರಿಕ ಚುನಾವಣೆಗೆ ಇಲ್ಲಿಂದಲೇ ಕಲ್ಯಾಣ ಕರ್ನಾಟಕದ 41 ಕ್ಷೇತ್ರಗಳಿಗೆ ವಿಜಯ ಕಹಳೆ ಮೊಳಗಿಸಲಾಗುವುದು ಎಂದು ಸಚಿವ ಶ್ರೀರಾಮುಲು ತಿಳಿಸಿದರು.

ಸಂಡೂರು : ಫೆ. 23ರಂದು ಸಂಡೂರಿಗೆ ಅಮಿತ್‌ ಶಾ ಆಗಮಿಸುತ್ತಿದ್ದು, 2023ರ ಸಾರ್ವತ್ರಿಕ ಚುನಾವಣೆಗೆ ಇಲ್ಲಿಂದಲೇ ಕಲ್ಯಾಣ ಕರ್ನಾಟಕದ 41 ಕ್ಷೇತ್ರಗಳಿಗೆ ವಿಜಯ ಕಹಳೆ ಮೊಳಗಿಸಲಾಗುವುದು ಎಂದು ಸಚಿವ ಶ್ರೀರಾಮುಲು ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿಯ ಎಸ್‌ಆರ್‌ಎಸ್‌ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai), ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ(BS Yadiyurappa), ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ(Pralhad joshi), ರಾಜ್ಯ ಹಾಗೂ ಕೇಂದ್ರದ ಅನೇಕ ನಾಯಕರುಗಳು ಭಾಗವಹಿಸಲಿದ್ದಾರೆ. ದೇಶದ ಎರಡನೆಯ ಮೈನಿಂಗ್‌ ಕಾಲೇಜು ಸಂಡೂರಿನಲ್ಲಿ ಆರಂಭವಾಗಲಿದ್ದು, ಪ್ರಧಾನಿ ಮೋದಿ ಕೂಡಾ ಮುಂದಿನ ದಿನಗಳಲ್ಲಿ ಸಂಡೂರಿಗೆ ಆಗಮಿಸಲಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳಿಂದ ಪತ್ರ ಬರೆಸಲಾಗುತ್ತಿದೆ ಎಂದರು.

ಸಂಡೂರು(Sanduru) ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪವೇ ಆಗಿಲ್ಲ ಎಂಬ ಪ್ರಶ್ನೆಗೆ ಅದು ಆನ್‌ಗೋಯಿಂಗ್‌ ವರ್ಕ್, ಅದನ್ನ ಬಜೆಟ್‌ನಲ್ಲಿ ಇಡೋಕೆ ಹೋಗುವುದಿಲ್ಲ. ನೀರಾವರಿ ಇಲಾಖೆಗೆ ನಿಗದಿಪಡಿಸಿದ ಹಣ ಅಲ್ಲಿ ಬಳಸಲಾಗುತ್ತದೆ ಎಂದರು.

ರಾಮುಲು ಗೆಲುವು ಖಚಿತ:

ಈ ಬಾರಿ ಒಂದು ಶಾರ್ಟ್ ಲಿಸ್ಟ್‌ ಮಾಡಿಕೊಂಡಿದ್ದೇನೆ. ಬಳ್ಳಾರಿ ಮತ್ತು ಸಂಡೂರಿ(Bellary and sanduru)ನಿಂದಲೇ ಸ್ಪರ್ಧಿಸಬೇಕೆಂದು ನಿರ್ಧರಿಸಿದ್ದೇನೆ. ಪಕ್ಷದ ವರಿಷ್ಠರ ನಿರ್ಧಾರದಂತೆ ಮುಂದುವರೆಯುತ್ತೇನೆ. ಬಾದಾಮಿಯಿಂದಲೂ ಕೂಡಾ ಸ್ಪರ್ಧೆಗೆ ಒತ್ತಡ ಬರುತ್ತಿದೆ. ಹೋರಾಟದ ಹಿನ್ನೆಲೆಯಿಂದ ಬಂದಿರುವುದರಿಂದ ಎಲ್ಲ ಕಡೆ ಕರೆಯುತ್ತಿದ್ದಾರೆ. ನಾನು ರಾಜ್ಯದ ನಾಯಕ. ನಾನೆಂದರೆ ಇಲ್ಲಿನ ಜನರು ಕುಣಿದು ಕುಪ್ಪಳಿಸುತ್ತಾರೆ. ರಾಮುಲು(Sriramulu) ಬಂದರೆ ಗೆಲುವು ಗ್ಯಾರಂಟಿ. ಮೊಳಕಾಲ್ಮೂರು ದೂರ ಆಗಲಿದೆ. ಇದೇ ಜಿಲ್ಲೆಯಲ್ಲಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದೇನೆ. ನಮ್ಮ ಸರ್ಕಾರ ಇದ್ದಾಗ ಸಂಡೂರಿನಿಂದ ಹೊಸಪೇಟೆ, ಕೂಡ್ಲಿಗಿ, ಕುಮಾರಸ್ವಾಮಿ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಕೆರೆಗಳಿಗೆ ನೀರು ತುಂಬುವ ಮೂಲಕ ಈ ಭಾಗದ ಜನರ ನಿರೀಕ್ಷೆ ಈಡೇರಿಸಲಿದ್ದೇವೆ ಎಂದರು.

ಸಂತೋಷ್‌ ಲಾಡ್‌(Santosh Lad) ಆಲಿಂಗನದ ಕುರಿತು ಪ್ರತಿಕ್ರಿಯಿಸಿ ಅದು ಆತ್ಮೀಯತೆಯ ಆಲಿಂಗನವಷ್ಟೆ. ಬಹಳ ವರ್ಷಗಳಿಂದ ನಮ್ಮ ಮಧ್ಯೆ ಸ್ನೇಹವಿದೆ. ರಾಜಕೀಯವಾಗಿ ಅವರ ಪಕ್ಷವೇ ಬೇರೆ ನಮ್ಮ ಪಕ್ಷವೇ ಬೇರೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಎಸ್ಟಿಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಕೆ.ಎಸ್‌ ದಿವಾಕರ್‌, ಜಿಲ್ಲಾಧ್ಯಕ್ಷ ಮುರಹರಿಗೌಡÜ, ಮಂಡಲ ಅಧ್ಯಕ್ಷ ಜಿ.ಟಿ.ಪಂಪಾಪತಿ, ವಾಡಾ ಅಧ್ಯಕ್ಷ ಕರಡಿ ಯರ್ರಿಸ್ವಾಮಿ, ರಾಮಘಡ ರಘು, ಅಂಬರೀಶ್‌, ಪುರಸಭೆ ಸದಸ್ಯ ಹರೀಶ, ನರಸಿಂಹ, ಸಿ.ರಮೇಶ್‌, ವೆಂಕಟಸುಬ್ಬಯ್ಯ, ಸತೀಶ್‌ ಹೆಗಡೆ, ವಾಮಣ್ಣ, ಪ್ರಹ್ಲಾದ್‌, ಯಲ್ಲಪ್ಪ, ದರೋಜಿ ರಮೇಶ್‌, ಪ್ರಶಾಂತ್‌ ಹಿರೇಮಠ್‌,ಅಬ್ದುಲ್‌ ಮುನಾಫ್‌, ಪ್ರಹ್ಲಾದ್‌ ಇತರರು ಇದ್ದರು.