ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಜನಾರ್ದನ ರೆಡ್ಡಿ ಪತ್ನಿ ಸಭೆ: ಕೈ-ಕಮಲದಲ್ಲಿ ಆತಂಕ ಶುರು

Byವರದಿಗಾರ

Feb 14, 2023

ಬಳ್ಳಾರಿ ನಗರದ 40ಕ್ಕೂ ಹೆಚ್ಚು ಮಸೀದಿಗಳ ಮೌಲ್ವಿಗಳ ಜೊತೆ ಲಕ್ಷ್ಮೀ ಅರುಣಾ ಸಭೆ ನಡೆಸಿದ್ದಾರೆ. ಮೌಲ್ವಿಗಳು ಮತ್ತು ಹಾಫೀಜ್​ಗಳ ಮೂಲಕ ಸಮುದಾಯ ಸೆಳೆಯವ ಪ್ಲಾನ್​ ಮಾಡಿಕೊಂಡಿದ್ದಾರೆ.

 

ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ (Janardhana Reddy) ರಾಜ್ಯ ರಾಜಕಾರಣದಲ್ಲಿ ಎರಡನೇ ಇನಿಂಗ್ಸ್​ ಶುರುವಹಚ್ಚಿಕೊಂಡಿದ್ದಾರೆ. ಬಿಜೆಪಿಯಿಂದ (BJP) ಹೊರಬಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿದ್ದಾರೆ. ರೆಡ್ಡಿಯ ಹೊಸ ಪಕ್ಷ ಘೋಷಿಸುತ್ತಿದ್ದಂತೆ ರಾಜ್ಯ ಬಿಜೆಪಿ ವಲಯದಲ್ಲಿ ಸಾಕಷ್ಟು ಚರ್ಚೆಗಳು ನಡೆದವು. ಜನಾರ್ದನ ರೆಡ್ಡಿಯನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂದು ರಾಜ್ಯ ನಾಯಕರು ಹೈಕಮಾಂಡಗೆ ಒತ್ತಯಿಸಿದರೂ ಇನ್ನೂ ಕೂಡ ನೆರವೇರಿಲ್ಲ. ಇನ್ನೂ ಜನಾರ್ದನ ರೆಡ್ಡಿಯ ಹೊಸ ಪಕ್ಷ ಬಿಜೆಪಿಯ ಬಿ ಟೀಂ ಆಗಲಿದೆ ಎನ್ನಲಾಗುತ್ತಿದೆ. ಈ ವಿಚಾರವನ್ನು ರೆಡ್ಡಿ ತಳ್ಳಿ ಹಾಕಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಮೂರು ಪಕ್ಷಗಳಿಗೆ ತೆಲೆನೋವಾಗಿದೆ. ಗಣಿಧಣಿ ಮುಖ್ಯವಾಗಿ ಕಲ್ಯಾಣ ಕರ್ನಾಟಕವನ್ನೇ ಗುರಿಯಾಗಿಸಿಕೊಂಡು ಪಕ್ಷ ಸ್ಥಾಪಿಸಿದ್ದು, ಮೂರು ರಾಜಕೀಯ ಪಕ್ಷಗಳ ಮತಗಳು ಡಿವೈಡ್​ ಆಗುವ ಸಾಧ್ಯತೆ ಇದೆ.

 

ರೆಡ್ಡಿ ಈಗಾಗಲೆ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದು, ತಮ್ಮ ಎರಡನೇ ಇನಿಂಗ್ಸ್​ ಆಟ ಶುರು ಮಾಡಿದ್ದಾರೆ. ಇನ್ನು ಕಲ್ಯಾಣ ರಥ ಯಾತ್ರೆ ಕೂಡ ಪ್ರಾರಂಭಿಸಿದ್ದು, ಅಂಜಾನದ್ರಿಯಲ್ಲಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು. ಈ ವೇಳೆ ಬಳ್ಳಾರಿ ವಿಧಾನಸಭಾ ಕ್ಷೇತ್ರಕ್ಕೆ ಪತ್ನಿ ಲಕ್ಷ್ಮೀ ಅರುಣಾರನ್ನು ಸಹೋದರ ಸೋಮಶೇಖರ ರೆಡ್ಡಿ ವಿರುದ್ಧ ಕಣಕ್ಕಿಳಿಸಿದ್ದಾರೆ. ಈ ಮೂಲಕ ಬಳ್ಳಾರಿ ಜಿಲ್ಲೆ ಪ್ರವೇಶ ನಿರ್ಬಂಧ ಹಿನ್ನೆಲೆ ಜನಾರ್ದನ ರೆಡ್ಡಿ ಅವರು ತಮ್ಮ ಪತ್ನಿ ಲಕ್ಷ್ಮೀ ಅರುಣಾ ಅವರ ಮೂಲಕ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ಮುಂದಾಗಿದ್ದಾರೆ.

ಮುಸ್ಲಿಂ ಮತಗಳನ್ನ ಸೆಳೆಯಲು ರೆಡ್ಡಿ ಮಾಸ್ಟರ್ ಪ್ಲ್ಯಾನ್

ಜನಾರ್ದನ ರೆಡ್ಡಿ ಮುಸ್ಲಿಂ ಮತಗಳನ್ನ ಸೆಳೆಯಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಕಾಂಗ್ರೆಸ್ ವೋಟ್ ಬ್ಯಾಂಕ್ ಮೇಲೆ ಕೆಆರ್​ಪಿಪಿ ಕಣ್ಣು ಇಟ್ಟಿದೆ. ಈ ಹಿಂದೆ ರೆಡ್ಡಿ ಅಮೀರ್ ದರ್ಗಾಕ್ಕೆ ಭೇಟಿ ನೀಡಿ ಚಾದರ್ ಸಲ್ಲಿಕೆ ಮಾಡಿದ್ದರು. ಗಂಗಾವತಿ ಕ್ಷೇತ್ರದ ಖಾಲಿದ್ ಅಲಿ ಬಾಬಾ ದರ್ಗಾಗೂ ಸಹಾಯ ಮಾಡಿದ್ದರು. ಈ ಮೂಲಕ ಮುಸ್ಲಿಂ ಸಮುದಾಯದ ಮನವೊಲಿಕೆಗೆ ರೆಡ್ಡಿ ರಣತಂತ್ರ ರೂಪಿಸಿದ್ದು, ಕಾಂಗ್ರೇಸ ಪಕ್ಷದ ವೋಟ್ ಬ್ಯಾಂಕ್ ಕಬಳಿಸಲು ಸಭೆಗಳ ಮೇಲೆ ಸಭೆ ನಡೆಸುತ್ತಿದ್ದಾರೆ. ಹೌದು ಬಳ್ಳಾರಿ ನಗರದ 40ಕ್ಕೂ ಹೆಚ್ಚು ಮಸೀದಿಗಳ ಮೌಲ್ವಿಗಳ ಜೊತೆ ಲಕ್ಷ್ಮೀ ಅರುಣಾ ಸಭೆ ನಡೆಸಿದ್ದಾರೆ.

ಮೌಲ್ವಿಗಳು ಮತ್ತು ಹಾಫೀಜ್​ಗಳ ಮೂಲಕ ಸಮುದಾಯವನ್ನು ತಮ್ಮತ್ತ ಸೆಳೆಯಲು ಯತ್ನಿಸಿದ್ದಾರೆ. ಮೌಲ್ವಿಗಳು ಲಕ್ಷ್ಮೀ ಅರುಣಾ ದುವಾ ಮಾಡಿ ಬೆಂಬಲಿಸಿದ್ದಾರೆ. ಲಕ್ಷ್ಮೀ ಅರುಣಾ ಪರವಾಗಿ ಮೌಲ್ವಿಗಳು ಪ್ರಾರ್ಥನೆ ಸಲ್ಲಿಸಿ ಹಾರೈಸಿದ್ದಾರೆ. ರೆಡ್ಡಿ ಪಕ್ಷಕ್ಕೆ ಮುಸ್ಲಿಂ ಸಮುದಾಯದ ಬೆಂಬಲ ಸಿಕ್ಕರೇ ಕಾಂಗ್ರೇಸ್​​-ಬಿಜೆಪಿಗೆ ಏಟು ಬೀಳಲಿದೆ. ಕಲ್ಯಾಣ ಕರ್ನಾಟಕದ 42 ವಿಧಾನಸಭಾ ಕ್ಷೇತ್ರಗಳಲ್ಲಿದೆ ಮುಸ್ಲಿಂ ಮತ ಬ್ಯಾಂಕ್ ಚೆನ್ನಾಗಿದೆ. ಹೀಗಾಗಿ ಜನಾರ್ದನ ರೆಡ್ಡಿ ರಣತಂತ್ರದಿಂದ ಕಾಂಗ್ರೆಸ್​-ಬಿಜೆಪಿ ನಾಯಕರು ಕಂಗಾಲಾಗಿದ್ದಾರೆ.