ಆಧಾರ್ ಕಾರ್ಡ್‌ನಲ್ಲಿನ ತಪ್ಪು ಮಾಹಿತಿ ಸರಿಪಡಿಸುವುದು ಹೇಗೆ? ಇಲ್ಲಿ ತಿಳಿಯಿರಿ

Byವರದಿಗಾರ

Feb 13, 2023

ಬೆಂಗಳೂರು, ಫೆಬ್ರವರಿ 12: ಭಾರತದ ಪ್ರಜೆಗಳಿಗೆ ಆಧಾರ ಕಾರ್ಡ್ ಎಂಬುದು ಅತ್ಯಂತ ವಿಶಿಷ್ಟ ಗುರುತಿನ ದಾಖಲೆಯಾಗಿದೆ. ಹಣಕಾಸು ವಹೀವಾಟು ಸೇರಿದಂತೆ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಈ ಆಧಾರ್ ಸಂಖ್ಯೆ ಕಡ್ಡಾಯ ಮಾಡಲಾಗಿದೆ. ಇಂತಹ ಕಾರ್ಡ್‌ನಲ್ಲಿನ ಹೆಸರು, ಸಂಖ್ಯೆ, ಜನ್ಮದಿನಾಂಕದಲ್ಲಿನ ಲೋಪದೋಷ ಸರಿಮಾಡಿಕೊಳ್ಳುವ ಬಗ್ಗೆ ಇಲ್ಲಿ ತಿಳಿಯಿರಿ.

 

ಯುಐಡಿಎಐ 2012 ರಲ್ಲಿ ಪ್ರತಿ ಭಾರತೀಯ ನಾಗರಿಕರಿಗೆ ಒಂದೇ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಒದಗಿಸುವ ಸಲುವಾಗಿ ಆಧಾರ್ ಕಾರ್ಡ್ ಯೋಜನೆ ಪ್ರಾರಂಭಿಸಿತು. ಈ ಆಧಾರ್ ಕಾರ್ಡ್ ಹೆಸರು, ಜನ್ಮ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ, ವಿಳಾಸ ಮತ್ತು ಫೋಟೋ ಸೇರಿದಂತೆ ಅಗತ್ಯ ಮಾಹಿತಿ ಒಳಗೊಂಡ ಪ್ರಮುಖ ದಾಖಲೆಯಾಗಿದೆ.

ಹಣಕಾಸಿಗೆ ಸಂಬಂಧಿಸಿದಂತೆ ಬ್ಯಾಂಕ್ ಖಾತೆ ತೆರೆಯುವುದು, ಸಾರ್ವಜನಿಕ ವಿತರಣಾ ವ್ಯವಸ್ಥೆ (PDS), ಪಿಂಚಣಿಗಳು, EPF ಹಿಂಪಡೆಯುವಿಕೆ ಸೇರಿದಂತೆ ಮುಂತಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳನ್ನು ಪಡೆಯಲು ಆಧಾರ್ ಕಾರ್ಡ್ ಈಗ ಕಡ್ಡಾಯಗೊಳಿಸಲಾಗಿದೆ.

Swiggy: ಪಾಸವರ್ಡ್, ಬಳಕೆಗೆ ನಿಯಮ ಪರಿಷ್ಕರಣೆ, ಏನಿದು? ತಿಳಿಯಿರಿ

ಹೀಗೆ ಕಡ್ಡಾಯಗೊಳಿಸಿರುವ ಆಧಾರ ಕಾರ್ಡ್‌ನಲ್ಲಿ ನಿಮಗೆ ಸಂಬಂಧಿಸಿದಂತೆ ಮಾಹಿತಿಯಲ್ಲಿ ದೋಷಗಳು ಇದ್ದರೆ, ಅವುಗಳನ್ನು ಪರಿಹರಿಸಿಕೊಳ್ಳುವುದು ಕಿರಿಕಿರಿಯಾಗಿ ಮಾರ್ಪಡಬಹುದು. ಎಷ್ಟೋ ಬಾರಿ ಕೆಲಸದ ಮಧ್ಯೆ ಆಧಾರ್‌ನಲ್ಲಿ ತಪ್ಪುಗಳನ್ನು ಸರಿಪಡಿಸಲು ಆಗದೇ ಇರಬಹುದು. ಇಂತಹ ಸಂದರ್ಭದಲ್ಲಿ ಆಧಾರ್ ಕಾರ್ಡ್‌ನಲ್ಲಿನ ನಿಮ್ಮ ವೈಯಕ್ತಿಕ ಮಾಹಿತಿಯನ್ನು ದೋಷ-ಮುಕ್ತವಾಗಿಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ತಂತ್ರಜ್ಞಾನದ ಯುಗಲದಲ್ಲಿ ನೀವು ಆನ್‌ಲೈನ್‌ನಲ್ಲೇ ಆಧಾರ್ ಕಾರ್ಡ್‌ನಲ್ಲಿ ಹೆಸರನ್ನು ಬದಲಾಯಿಸಬಹುದು ಅಥವಾ ನಿಮ್ಮ ಹೆಸರಿನ ಕಾಗುಣಿತವನ್ನು ಸರಿಪಡಿಸಬಹುದು. ಆನ್‌ಲೈನ್‌ನಲ್ಲಿ ಹೆಸರನ್ನು ಬದಲಾಯಿಸಲು ಅಥವಾ ಕಾಗುಣಿತವನ್ನು ಸರಿಪಡಿಸಲು ಈ ಕೆಳಗಿರುವ ಹಂತ-ಹಂತದ ನೀವು ಪಾಲಿಸಬೇಕಿರುತ್ತದೆ.

* ಮೊದಲು ಈ https://ssup.uidai.gov.in/ssup ನಲ್ಲಿ ಆಧಾರ್ ಪೋರ್ಟಲ್‌ಗೆ ಭೇಟಿ ನೀಡಬೇಕು.

* ಆಧಾರ ಜತೆಗೆ ನೋಂದಾಯಿಸಲ್ಪಟ್ಟ ಮೊಬೈಲ್ ಸಂಖ್ಯೆ ಹಾಗೂ ಸ್ವೀಕರಿಸುವ OTP ಬಳಸಿ ‘ಲಾಗಿನ್’ ಕ್ಲಿಕ್ ಮಾಡಬೇಕು.

* ತೆರೆದುಕೊಳ್ಳುವ ಪರದೆಯಲ್ಲಿ ‘ಸೇವೆ’ ವಿಭಾಗದ ಅಡಿಯಲ್ಲಿ ‘ಆಧಾರ್ ಆನ್‌ಲೈನ್‌ನಲ್ಲಿ ನವೀಕರಿಸಿ’ ಆಯ್ಕೆ ಮಾಡಿಕೊಳ್ಳಿ.

* ಹೆಸರು ಸಂಪಾದನೆ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ಸರಿಯಾದ ಕಾಗುಣಿತ ಟೈಪ್ ಮಾಡಬೇಕು.

* ನಂತರ ಸಲಿಕ್ಕೆ ಬಟನ್ ಮೇಲೆ ಕ್ಲಿಕ್ ಮಾಡಿದರೆ ಮುಗಿಯಿತು ಲೋಪದೋಷಗಳು ಸರಿಯಾಗುತ್ತವೆ.

Related Post