‘ಈ ಬಾರಿ ಸಂಡೂರು, ಬಳ್ಳಾರಿಯಲ್ಲಿ ಗೆಲ್ಲಲಿ’- ರಾಮುಲುಗೆ ಕಾಂಗ್ರೆಸ್​ MLA ನಾಗೇಂದ್ರ ಸವಾಲ್​

Byವರದಿಗಾರ

Feb 9, 2023

ಳ್ಳಾರಿ: ಸಾರಿಗೆ ಸಚಿವ ಶ್ರೀರಾಮುಲುಗೆ ಕಾಂಗ್ರೆಸ್ ಬಳ್ಳಾರಿ ಶಾಸಕ ಬಿ.ನಾಗೇಂದ್ರ ಸವಾಲು ಹಾಕಿದ್ದಾರೆ. ಬಳ್ಳಾರಿ ಗ್ರಾಮಾಂತರ ಹಾಗೂ ಸಂಡೂರಿನಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಎರಡೂ ಕ್ಷೇತ್ರದಲ್ಲಿ ಯಾರೇ ಬಂದ್ರೂ ಗೆಲ್ಲೋದೇ ಕಾಂಗ್ರೆಸ್ ಎಂದು ಗುಡುಗಿದ್ದಾರೆ.

 

ವಿಧಾನಸಭಾ ಚುನಾವಣೆಯಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಬಳ್ಳಾರಿ ಗ್ರಾಮಾಂತರ ಹಾಗೂ ಸಂಡೂರಿನಲ್ಲಿ ಸ್ಪರ್ಧಿಸುವ ಸುಳಿವು ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ನಾಗೇಂದ್ರ, ಬಳ್ಳಾರಿ ಗ್ರಾಮಾಂತರ ಹಾಗೂ ಸಂಡೂರಲ್ಲಿ ಯಾರೇ ಬಂದ್ರೂ ಗೆಲ್ಲೋದು ಕಾಂಗ್ರೆಸ್ ಮಾತ್ರ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಕಾಂಗ್ರೆಸ್ 150 ಸ್ಥಾನ ಗೆದ್ದು ಬಹುಮತ ಪಡೆಯಲಿದೆ. ಬಿಜೆಪಿಯ ದುರಾಡಳಿತಕ್ಕೆ 2023 ರಲ್ಲಿ ಜನ ಬುದ್ಧಿ ಕಲಿಸಲಿದ್ದಾರೆ ಎಂದರು.

ಮಾಜಿ ಸಚಿವ ಜನಾರ್ದನ‌ ರೆಡ್ಡಿ ಅವರ ತಂತ್ರಗಾರಿಕೆಯಿಂದ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು. ಆದ್ರೀಗ ಬಿಜೆಪಿ ನಾಯಕರು ಅವರ ಮನಸು ನೋಯಿಸುವಂತೆ ನಡೆದುಕೊಂಡಿದ್ದಾರೆ. ನಾನು ಜನಾರ್ದನ ರೆಡ್ಡಿ ಅವರಿಂದಲೇ ರಾಜಕೀಯಕ್ಕೆ ಬಂದಿದ್ದೇನೆ. ಅವರು ಕಾಂಗ್ರೆಸ್‌ಗೆ ಬೆಂಬಲ‌ ಕೊಡ್ತಾರೆ ಅಂದ್ರೆ ಖಂಡಿತ ಸ್ವೀಕಾರ ಮಾಡ್ತೇವೆ ಎಂದಿದ್ದಾರೆ.