ರೆಡ್ಡಿ ಅಸಲಿ ಆಟ ಶುರು..!! ‘ಆಪರೇಷನ್ -77’ ಮೂಲಕ ಕಿಂಗ್ ಮೇಕರ್ ಆಗಲು ಗಣಿಧಣಿ ಪ್ಲಾನ್..!

Byವರದಿಗಾರ

Feb 6, 2023

ರಾಜ್ಯ ರಾಜಕಾರಣದಲ್ಲಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕವೇ ಪಕ್ಷಗಳ ಪಾಲಿನ ಅಕ್ಷಯಪಾತ್ರೆ. ಈ ಎರಡೂ ಪ್ರದೇಶಗಳಲ್ಲಿ ಅತಿಹೆಚ್ಚು ಸೀಟುಗಳನ್ನು ಗೆದ್ದರೆ, ಅಧಿಕಾರ ಪಕ್ಕಾ ಅನ್ನೋದು ಕಾಂಗ್ರೆಸ್, ಬಿಜೆಪಿ ಲೆಕ್ಕಾಚಾರ. ಆದ್ರೆ ಕೈ-ಕಮಲಕ್ಕೆ ಚೆಕ್​ಮೇಟ್ ಕೊಟ್ಟಿರೋ ಗಣಧಣಿ, ಪ್ರಭಾವಿ ನಾಯಕರಿಗೇ ಗಾಳ ಹಾಕ್ತಿದ್ದಾರೆ.

 

ಹೌದು.. ಬಳ್ಳಾರಿ.. ಸದ್ಯ ರಾಜ್ಯ ರಾಜಕಾರಣದ ಹಾಟ್​​ಸ್ಪಾಟ್.. ಅದ್ಯಾವಾಗ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಂತಾ ಹೊಸ ದಾಳ ಉರುಳಿಸಿದ್ರೋ, ರಾಜಕೀಯ ಪಡಸಾಲೆಯಲ್ಲಿ ಭಾರೀ ಚರ್ಚೆ ನಡೀತಿದೆ. ಅದ್ರಲ್ಲೂ ಕ್ರೂಷಿಯಲ್ ಬಳ್ಳಾರಿ ಕ್ಷೇತ್ರದಲ್ಲಿ ತಮ್ಮ ಸಹೋದರನ ವಿರುದ್ಧವೇ ಧರ್ಮಪತ್ನಿಯನ್ನು ಕಣಕ್ಕಿಳಿಸಿ ಮಾಸ್ಟರ್ ಸ್ಟ್ರೋಕ್ ನೀಡಿದ್ದರು. ಇವೆಲ್ಲಾ ಹಳೇ ಕತೆಯಾದ್ರೆ ಇದೀಗ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಟಾರ್ಗೆಟ್ ಮಾಡಿ ಹೊಸ ತಂತ್ರಗಾರಿಕೆ ಹೆಣೆದಿದ್ದಾರೆ.

 

ಉತ್ತರ ಕರ್ನಾಟಕಕ್ಕೆ ಕಿಂಗ್​​ಮೇಕರ್ ಆಗಲು 77 ಅಸ್ತ್ರ
ಆಡಳಿತಾರೂಢ ಬಿಜೆಪಿಗೆ ಸೆಡ್ಡು ಹೊಡೆದು ಕೆಆರ್​ಪಿಪಿ ಸ್ಥಾಪಿಸಿರೋ ಜನಾರ್ದನ ರೆಡ್ಡಿ ಸುಮ್ಮನೆ ಕೂತಿಲ್ಲ. ನಿರ್ಣಾಯಕ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿ ಅಚ್ಚರಿ ಮೂಡಿಸಿರೋ ಗಣಿಧಣಿ ಮತ್ತೊಂದು ಮೆಗಾ ಪ್ಲಾನ್​ಗೆ ಕೈ ಹಾಕಿದ್ದಾರೆ. ನೂತನ ಪಕ್ಷ ಬಲವರ್ದನೆಗೆ ತಂತ್ರ ರೂಪಿಸಿರೋ ಮಾಜಿ ಸಚಿವ, ಆಪರೇಷನ್ ಸೆವೆಂಟಿ ಸೆವೆನ್ ಅನ್ನೋ ಸ್ಟ್ರಾಟಜಿ ಸಿದ್ಧಪಡಿಸಿದ್ದಾರೆ. ಈ ಮೂಲಕ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಗೆ ಮರ್ಮಾಘಾತ ನೀಡಲು ಮುಂದಾಗಿದ್ದಾರೆ. ಎರಡೂ ಪಕ್ಷಗಳು ಯಾವ ಪ್ರದೇಶಗಳನ್ನೇ ಅಧಿಕಾರಕ್ಕೇರುವ ಮೆಟ್ಟಿ ಅಂತಾ ಭಾವಿಸಿತ್ತೋ ಅದೇ ಅಖಾಡದಲ್ಲಿ ನಾಯಕರನ್ನು ತಮ್ಮತ್ತ ಸೆಳೆಯಲು ರಣತಂತ್ರ ಹೆಣೆದಿದ್ದಾರೆ. ಎರಡೂ ಪಕ್ಷಗಳ ಪ್ರಭಾವಿ ನಾಯಕರಿಗೆ ಗಾಳ ಹಾಕಿರೋ ಜನಾರ್ದನ ರೆಡ್ಡಿ, ಉತ್ತರ ಕರ್ನಾಟಕ ಭಾಗವನ್ನೇ ಮೇನ್ ಟಾರ್ಗೆಟ್ ಮಾಡಿದ್ದಾರೆ.

 

ಗಣಿಧಣಿ ಆಪರೇಷನ್ 77

  • ಕಲ್ಯಾಣ ಕರ್ನಾಟಕದಲ್ಲಿ ರೆಡ್ಡಿ ಅಸಲಿ ಆಟ ಶುರು
  • ಕಿಂಗ್ ಮೇಕರ್ ಆಗಲು ಉ.ಕ ಭಾಗಕ್ಕೆ ರೆಡ್ಡಿ 77 ಅಸ್ತ್ರ
  • ಬಿಜೆಪಿ, ಕಾಂಗ್ರೆಸ್​ನ 77 ನಾಯಕರನ್ನ ಸೆಳೆದ ರೆಡ್ಡಿಗಾರು
  • KRP ಪಕ್ಷ ಸೇರಲಿದ್ದಾರೆ 77 ರಾಜಕೀಯ ಪ್ರಭಾವಿಗಳು
  • ಉತ್ತರ ಕರ್ನಾಟಕ ಹಿಡಿತಕ್ಕೆ ರೆಡ್ಡಿ ಅಸ್ತ್ರ ಪ್ರಯೋಗ
  • ಕಲ್ಯಾಣ ಕರ್ನಾಟಕದ ಜೊತೆ ಉತ್ತರ ಕರ್ನಾಟಕದತ್ತ ಚಿತ್ತ
  • ಚುನಾವಣೆ ಹೊಸ್ತಿಲಿನಲ್ಲಿ ರಾಷ್ಟ್ರೀಯ ಪಕ್ಷಕ್ಕೆ ಕೌಂಟರ್‌

ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಮೇಲೆ ಹಿಡಿತ ಸಾಧಿಸಲು ರೆಡ್ಡಿ ತಂತ್ರ ರೂಪಿಸ್ತಿದ್ದಂತೆ ಬಿಜೆಪಿಯಲ್ಲಿ ನಡೀತಿರೋ ಬೆಳವಣಿಗೆ ಕೂಡಾ ಗಮನ ಸೆಳೆದಿದೆ. ಕಲ್ಯಾಣ ಕರ್ನಾಟಕದ ರಾಜಕೀಯ ಶಕ್ತಿ ಕೇಂದ್ರ ಬಳ್ಳಾರಿಯ ಬಗ್ಗೆ ಕ್ಷೇತ್ರವಾರು ರಿಪೋರ್ಟ್ ಕೊಡುವಂತೆ ಹೈಕಮಾಂಡ್ ಸೂಚಿಸಿದ್ದು, ವರದಿ ನೀಡಲು ಬಿಜೆಪಿ ತಯಾರಿ ನಡೆಸಿದೆ.

 

ಏನಿದು ‘ಕಲ್ಯಾಣ’ ರಿಪೋರ್ಟ್?
ಕೇಂದ್ರ, ರಾಜ್ಯ ಸರ್ಕಾರದ ಯೋಜನೆ ಫಲಾನುಭವಿಗಳನ್ನು ಗುರುತಿಸುವುದು. ಕಲ್ಯಾಣ ಕರ್ನಾಟಕದ ಮನೆ ಮನೆ ಭೇಟಿ ಬಳಿಕ ಬಿಜೆಪಿ ಟ್ರೆಂಡ್ ಹೇಗಿದೆ ಅಂತಾ ವರದಿ ತಯಾರಿಸಲಾಗಿದೆ. ಇದ್ರ ಪ್ರಕಾರ ಮೀಸಲಾತಿಯ ಅಸ್ತ್ರದ ಬಳಿಕ ಬಿಜೆಪಿ ಕ್ಷೇತ್ರವಾರು ಹಿಡಿತ ಹೇಗಿದೆ ಅನ್ನೋ ಮಾಹಿತಿ. ಬಿಜೆಪಿ ಹಾಲಿ ಶಾಸಕರ ಜನ ಸಂಪರ್ಕ, ಕ್ಷೇತ್ರದ ಮೇಲೆ ಹಿಡಿತ, ಕಲ್ಯಾಣ ಕರ್ನಾಟಕ ಭಾಗಕ್ಕೆ ಮೋದಿ, ನಡ್ಡಾ ಭೇಟಿ ಬಳಿಕ ಟ್ರೆಂಡ್, ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಭಾವ ಇರೋ ಕ್ಷೇತ್ರಗಳ ಬಗ್ಗೆ ಮಾಹಿತಿಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಕಾಂಗ್ರೆಸ್ ಹಾಲಿ ಶಾಸಕರ ಕ್ಷೇತ್ರದಲ್ಲಿ ಬಿಜೆಪಿಯ ಪ್ಲಸ್, ಮೈನಸ್ ಲೆಕ್ಕಾಚಾರ, ಚುನಾವಣೆಯಲ್ಲಿ ಬಿಜೆಪಿ ಎಷ್ಟು ಸ್ಥಾನ ಪಡೆಯಬಹುದು. ಬಿಜೆಪಿ ಸ್ಟಾರ್‌ ಪ್ರಚಾರಕ್ಕೆ ಯಾರು ಬಂದ್ರೆ ಕ್ಷೇತ್ರದಲ್ಲಿ ಹಿಡಿತ ಸಾಧಿಸಬಹುದು ಅಂತಾನೂ ವರದಿ ಸಿದ್ಧಪಡಿಸಲಾಗಿದೆ. ಇದ್ರ ಜೊತೆಗೆ ಬಿಜೆಪಿಯೊಂದಿಗೆ ನಿರಂತರ ಸಂಪರ್ಕ ಹೊಂದಿರೋ ‘ಕೈ’ ನಾಯಕರ ಪಟ್ಟಿ ತಯಾರಿಸಲಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಜನಾರ್ದನ ರೆಡ್ಡಿಯಿಂದ ಬಿಜೆಪಿ ಮೇಲೆ ಆಗೋ ಪರಿಣಾಮ ಬಗ್ಗೆಯೂ ವರದಿಯಲ್ಲಿ ಡಿಟೇಲಾಗಿ ಮಾಹಿತಿ ನೀಡಲಾಗಿದೆ.

 

ಒಟ್ನಲ್ಲಿ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪಿಸಿದ್ದೂ ಅಲ್ಲದೆ ಕಾಂಗ್ರೆಸ್, ಬಿಜೆಪಿ ಪಕ್ಷಗಳಿಗೂ ಟೆನ್ಷನ್ ಕೊಟ್ಟಿದ್ದಾರೆ. ತಾವಿಟ್ಟ ಹೆಜ್ಜೆ ಹಿಂದಕ್ಕೆ ತೆಗೆಯೋ ಪ್ರಶ್ನೆ ಇಲ್ಲ ಅಂತಾ ಪ್ರಮುಖ ಪಕ್ಷಗಳ ವಿರುದ್ಧವೇ ತೊಡೆ ತಟ್ಟಿದ್ದಾರೆ. ಜಗ್ಗಲ್ಲ, ಬಗ್ಗಲ್ಲ, ಕುಗ್ಗಲ್ಲ, ಯಾರಿಗೂ ಹೆದರೋ ಪ್ರಶ್ನೆಯೇ ಇಲ್ಲ ಅಂತಾ ಹೇಳುತ್ತಲೇ ರಾಷ್ಟ್ರೀಯ ಪಕ್ಷಗಳ ನಾಯಕರನ್ನೇ ಸೆಳೆದು ಹೊಸ ಪಕ್ಷದ ಬುಡ ಗಟ್ಟಿ ಮಾಡಿಕೊಳ್ತಿದ್ದಾರೆ.