ಈ ಬಾರಿ ಸಿದ್ದರಾಮಯ್ಯ ಎಲ್ಲೇ ಸ್ಪರ್ಧೆ ಮಾಡಿದ್ರೂ ಸೋಲು ಮಾತ್ರ ಖಚಿತ: ಸಚಿವ ಶ್ರೀರಾಮುಲು

Byವರದಿಗಾರ

Feb 5, 2023

ಕುರುಗೋಡು: ರಾಜ್ಯದ ಜನರಿಗೆ ಮಂಕುಬೂದಿ ಹಚ್ಚುತ್ತಾ ಸುಳ್ಳು ಯಾತ್ರೆಗಳನ್ನು ಎರಡು ಪಕ್ಷಗಳು ಮಾಡಿಕೊಂಡು ಹೋಗುತ್ತಿವೆ ಇವು ಯಾವುವು ಕೂಡಾ ಕಾರ್ಯ ರೂಪಕ್ಕೆ ಬರುವುದಿಲ್ಲ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.

ಸಮೀಪದ ಎಮ್ಮಿಗನೂರು ಗ್ರಾಮದ ಛಲವಾದಿ ಕಾಲೋನಿಯಲ್ಲಿ ನೆರೆವೆರಿದ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಯಾತ್ರೆಗಳು ಮಾಡಿದರು ಮುಂದೆ ಅಧಿಕಾರಕ್ಕೆ ಬರಲ್ಲ ಮತ್ತೆ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಪಕ್ಷ ಸ್ಪಷ್ಟಬಹುಮತ ಪಡೆದು ಅಧಿಕಾರ ಹಿಡಿಯಲಿದೆ ಎಂದರು.

 

ಸಿದ್ದರಾಮಯ್ಯ ಮೊದಲು ಬಾದಾಮಿ, ಈಗ ಕೋಲಾರ, ವರುಣಾದಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ. ಅವರು ಎಲ್ಲೇ ಸ್ಪರ್ಧೆ ಮಾಡಿದರೂ ಈ ಬಾರಿ ಅವರು ಸೋಲುವುದು ಮಾತ್ರ ನಿಚ್ಚಿತ ಎಂದರು.

ಈ ಬಾರಿ ಬಳ್ಳಾರಿಯಿಂದಲೇ ಅಂದರೆ ಗ್ರಾಮೀಣ ಅಥವಾ ಸಂಡೂರು ಕ್ಷೇತ್ರಗಳಿಂದ ನಾನು ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದರು.

ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ಬಿಜೆಪಿ ಪಕ್ಷಕ್ಕೆ ವರಿಷ್ಟರು ಕರೆತರುವ ವಿಷಯದ ಬಗ್ಗೆ ನನಗೆ ಗೊತ್ತಿಲ್ಲ ಇದರ ಬಗ್ಗೆ ಈಗಾಲೆ ಏನು ಅಂತ ಹೇಳಲಾಗುವುದಿಲ್ಲ ಎಂದು ಹೇಳಿದರು.

ಮುಂದೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 130 ರಿಂದ 140 ಸ್ಥಾನಗಳನ್ನು ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲಿವೆ ಎಂದರು.

ಕಂಪ್ಲಿ ಕ್ಷೇತ್ರದಲ್ಲಿ ಶಾಸಕ ಗಣೇಶ್ ಮಾತನಾಡಿ ಸಂವಿಧಾನ ಬದ್ದವಾಗಿ ರಾಜಕೀಯ ಮಾಡಬೇಕು. ಕಳೆದ ಕಾರ್ಯಕ್ರಮಗಳು ಮಾಡಿರೋದು ಅವರ ಸ್ಥಾನಕ್ಕೆ ಶೋಭೆಯಲ್ಲ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಸುರೇಶ್ ಬಾಬು, ಮಾಜಿ ಲೋಕಸಭಾ ಸದಸ್ಯೆ ಜೆ. ಶಾಂತ, ಕಂಪ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಿ. ಆರ್. ಹನುಮಂತ, ಎಸ್ಟಿ ಸಮುದಾಯದ ಮುಖಂಡ ವಿ. ಕೆ. ಬಸಪ್ಪ, ಗ್ರಾಪಂ ಅಧ್ಯಕ್ಷೆ ಚನ್ನದಾಸರ ಅಂಜಿನಮ್ಮ ನಾರಾಯಣಪ್ಪ ಸೇರಿದಂತೆ ಗ್ರಾಮದ ಮುಖಂಡರು ಮತ್ತು ಕಾರ್ಯಕರ್ತರು ಇತರರು ಇದ್ದರು.