ಮಾನವೀಯತೆ ಮರೆತರಾ ಶಾಸಕ ಜೆ.ಎನ್. ಗಣೇಶ್…? ಸಾವಿನ ಮನೆಯಲ್ಲೂ ರೀಲ್ಸ್ ರಾಜಕೀಯ

Byವರದಿಗಾರ

Feb 5, 2023

ಕಂಪ್ಲಿ ವಿಧಾನಸಭಾ ಕ್ಷೇತ್ರದ ಕುರುಗೋಡು ತಾಲೂಕಿನ ಗುತ್ತಿಗೆನೂರು ಗ್ರಾಮದ ಮಲ್ಲಿಕಾರ್ಜುನ ರವರ ಮಕ್ಕಳು ದಂತ ಮಣಿಕಾಂತ್ ಮತ್ತು ಹರೀಶ್ ಈ ಇಬ್ಬರು ಮಕ್ಕಳು ಧಾರಣ ಘಟನೆ ಯಿಂದ ಸಾವನ್ನಪ್ಪಿರುತ್ತಾರೆ , ಈ ಸಂದರ್ಭದಲ್ಲಿ ಶಾಸಕರಾದಂತಹ ಜೆಎನ್ ಗಣೇಶ್ ಅವರು ಮಕ್ಕಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸುವ ನೆಪದಲ್ಲಿ ಅದನ್ನು ವಿಡಿಯೋ ಚಿತ್ರೀಕರಣ ಮಾಡಿ ಫೇಸ್ಬುಕ್ ರೀಲ್ ಒಂದನ್ನು ಬಿಟ್ಟು ಮಾನವೀಯತೆಯನ್ನು ಮರೆತಿದ್ದಾರೆ ನಾವು ಮಾಡುವ ಒಳ್ಳೆಯ ಕೆಲಸ ಬೇರೆಯವರಿಗೆ ಕಾಣಬೇಕೆ ಹೊರತು ಬಲವಂತವಾಗಿ ಕಾಣಿಸುವಂತಹ ಕೆಲಸವಾಗಬಾರದು. ಈ ತರಹದ ಘಟನೆ ನಡೆದಾಗ ಮಾನ್ಯ ಶಾಸಕರು ಅವರ ಕುಟುಂಬದ ಜೊತೆ ಇದ್ದು ನಾ ಕುಟುಂಬಕ್ಕೆ ಸಾಂತ್ವನ ಹೇಳಬೇಕೆ ಹೊರತು ಈ ತರಹದ ರಾಜಕೀಯವಾಗಿ ಆ ಸನ್ನಿವೇಶವನ್ನ ಬಳಸಿಕೊಂಡಿರುವುದು ಎಷ್ಟರಮಟ್ಟಿಗೆ ಸರಿ..?

ನಿಮ್ಮ ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿಗಳ ಕೆಲಸಗಳು ಹಾಗೆಯೇ ನಿಂತಲ್ಲಿಯೇ ನಿಂತಿವೆ, ಅದನ್ನು ಕೂಡ ವಿಡಿಯೋ ಚಿತ್ರೀಕರಿಸಿ ಹಾಕಬಹುದಿತ್ತಲ್ಲವೇ ನಿಮ್ಮ ರಿಲ್ಸ್ ರಾಜಕಾರಣಕ್ಕಾಗಿ ಆ ಸನ್ನಿವೇಶವನ್ನೇ ಬಳಸಿಕೊಳ್ಳಬೇಕಿತ್ತೆ…?

ನಿಮ್ಮ ಅಧಿಕಾರದ ಅವಧಿಯಿಂದಲೂ ಈ ತರಹದ ವಿಷಯಗಳಿಗೆ ಮತ್ತೆ ಮತ್ತೆ ಹೆಸರುವಾಸಿಯಾಗುತ್ತಿದ್ದೀರಿ ನಿಮ್ಮ ರೆಸಾರ್ಟ್ ರಾಜಕಾರಣದಿಂದಲೂ ನಿಮ್ಮ ಕೆಲಸಗಳನ್ನು ನೋಡಿ ಕೇಳಿ ಜನರು ಬೇಸತ್ತು ಹೋಗಿದ್ದಾರೆ, ಈ ತರಹದ ರಾಜಕಾರಣ ನಿಮಗೆ ಒಳ್ಳೆಯದೇ ಎಂದು ಸಾಮಾನ್ಯ ಪ್ರಜೆಯ ಮನಸ್ಸಿನಲ್ಲಿರುವ ಮಾತಾಗಿದೆ